ಉಡುಪಿಯ ರಾಷ್ಟೀಯ ಹೆದ್ದಾರಿ ೧೭- ಉಚ್ಚಿಲದಿಂದ ಪೂರ್ವಕ್ಕೆ ತಿರುವಿ ,ಹಚ್ಚ ಹಸಿರಾಗಿ, ಬಾಗಿ ತಲೆಸವರುವಂತಹ ಗಿಡ ಬಳ್ಳಿಗಳಿಂದ ಕೂಡಿದ ,ಸ್ವಲ್ಪ ಇಕ್ಕಟ್ಟಾದ ಡಾಮರುರಸ್ತೆಯನ್ನು ನಾಲ್ಕು ಕಿಲೋ ಮೀಟರ್ನಷ್ಟು ದೂರ ಕ್ರಮಿಸಿದರೆ ಸಿಗುವ ಪುಟ್ಟ ಊರೇ ನಗು ಮೊಗವ ,ವಿಶಾಲ ಹೃದಯಿಗಳ ಊರು ” ಎಲ್ಲೂರು “ ಕಾಶಿನಾಥ, ಜಗದೊಡೆಯನ ದಿವ್ಯ ಸನ್ನಿಧಿ ಇರುವ ಎಲ್ಲೂರನ್ನು ”ವಿಶ್ವೇಶ್ವರ ಕ್ಷೇತ್ರ ” ಅಂದರೂ ತಪ್ಪೆನಿಲ್ಲಾ .ಈ ಜಗದದೊಡೆಯನು ಎಲ್ಲೂರರಿಗೆ “ಉಂಡಾಯಿ ಉಲ್ಲಾಯೇ ” ಅಂದರೆ “ಸ್ವಯಂ ಉದ್ಭವಿಸಿದ ಒಡೆಯ ” ,ಪ್ರತೀ ಸೋಮವಾರ ಹಾಗೂ ವಿಶೇಷ ದಿನಗಳಲ್ಲಿ ಊರ ಪರವೂರ ಭಕ್ತರಿಂದ ತುಂಬಿ ತುಳುಕುವ ಈ ಪುಣ್ಯ ಸ್ಥಳವು ನಿರ್ಮಾಣಗೊಂಡಿದ್ದು ಸಾವಿರಾರು ವರ್ಷಗಳ ಹಿಂದೆ . ಪ್ರಾಂತ್ಯರಸುಗಳಾದ ಕುತ್ಯಾರುಅರಸುಗಳಿಂದ ಪೂಜಿಸಲ್ಪಡುತ್ತಿದ್ದ ಒಟ್ಟು ಒಂಬತ್ತು ಮಾಗಣೆಗಳ (ಕುತ್ಯಾರು ,ನಂದಿಕೂರು , ಅಡ್ವೆ,ಉಳ್ಳೂರು ,ಕೊಳಚೂರು ,ಕುಂಜೂರು,ಕಳತ್ತೂರು , ಪಾದೂರು ,ಬೆಳಪು ,) ಎಲ್ಲೂರೊಡೆಯ ಮೂಲತಃ ಒಲಿದದ್ದು ಪರಿಶಿಷ್ಟ ಗುಂಪಿಗೆ ಸೇರಿದ ಮಹಿಳೆಗೆ ,(ಇತಿಹಾಸ ಕುರಿತ ಪುಸ್ತಕ ದೇವಳದಲ್ಲಿ ಲಭ್ಯ ) ಕಳೆದೆರೆಡು ವರುಷದ ಹಿಂದೆ ಸಕಲ ಭಗವದ್ಭಕ್ತರಿಂದ ಜಿರ್ಣೋದ್ದಾರವಾದ ದೇವಳದ ಒಟ್ಟು ರಚನೆಯು ಭಾರತದಾದ್ಯಂತ ಇತಿಹಾಸ ಪ್ರಸಿದ್ದ ಪಡೆದ ಪುರಾತನ ದೇವಳಗಳನ್ನು ಹೋಲುವ ರೀತಿಯಂತದ್ದು,ಮನಮೋಹಕಸೌಂದರ್ಯವನ್ನು ಒಳಗೊಂಡ ಬೇಲೂರ ಹಳೆಬೀಡುವಿನ ತದ್ರೂಪಿಯಂತೆ ಕಾಣಬರುವ ಗುಡಿ ಗೋಪುರಗಳು , ದೇವಳದ ಗರ್ಭಗುಡಿಯ ಸುತ್ತ ಕ್ಷೇತ್ರದ ನೋಟವ ಬೆರಗಾಗಿಸುವಂತಹ ಶಿಲೆ ಹಾಗೂ ಮರದ ಮೇಲೆ ಅದ್ಭುತವಾಗಿ ಕೆತ್ತಿದ ಕ್ಷೇತ್ರದ ಇತಿಹಾಸ ಸಾರುವ ಅಳಿಯದ ಚಿತ್ತಾರಗಳು ,ಪ್ರಾಂಗಣವನ್ನೊಮ್ಮೆ ಸುತ್ತಿ ಬಂದರೆ ಭಕ್ತರಲ್ಲಿ ಅಮೋಘವಾದ ಚೈತನ್ಯವನ್ನು ,ಲವಲವಿಕೆಯನ್ನು ,ಭಕ್ತಿಯನ್ನು ಇಮ್ಮಡಿಗೊಳಿಸುವಂತಹ ಕ್ಷೇತ್ರವಿದು . .ಇದಿಷ್ಟೂ ನನ್ನ ಮನದಲ್ಲಿದ್ದ ದೇವಳದ ಸೌಂದರ್ಯದ ಮೇಲ್ನೋಟಗಳು . ಸಾಧ್ಯವಿದ್ದರೆ ಪ್ರತಿಯೊಬ್ಬನು ಪುಣ್ಯಕ್ಷೇತ್ರವನ್ನು ಈ ದೇವಳನ್ನು ಕಣ್ಣಾರೆ ಕಂಡು ಆನಂದಿಸಿ .ಎಲ್ಲೂರು ಒಡೆಯನ ಉದ್ಭವ ಲಿಂಗವನು ಕಣ್ಣಲಿ ಕಣ್ಣಿಟ್ಟುನೋಡುವ ಪುಣ್ಯವನು ನಿಮ್ಮದಾಗಿಸಿಕೊಳ್ಳಿ ಈ ಒಡೆಯನ ಪುಣ್ಯ ಸ್ಥಳದಲ್ಲಿ ಅಂಗಡಿಯಿಂದ ಮಾರಲ್ಪಡುವ ಸೀಯಾಳವನ್ನು ಯಾವೂದೇ ವ್ಯಕ್ತಿ ಕುಡಿಯುವಂತಿಲ್ಲ ,ಏನಿದ್ದರೂ ಶಿವನ ಅಭಿಷೇಕಕ್ಕಾಗಿಯೇ ಮೀಸಲು ,ಇದೇ ಇಲ್ಲಿಯ ಜನರಿಂದ ಭಕ್ತಿಯನ್ನೂಳಗೊಂಡ ಆಚಾರ ಹಾಗೂ ಎಲ್ಲರೂ ಜೋಪಾನದಿಂದ ಕಾಪಾಡಿಕೊಂಡು ಬಂದಂತಹ ವಿಶೇಷತೆ